ಹೀಗೆ ಮಾಡಿ
- ಬ್ಯಾಂಕ್‌ನ ಸಂಪರ್ಕ ವಿವರಗಳಿಗೆ ಯಾವಾಗಲೂ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ನಿಮ್ಮ ಸಂಪರ್ಕ ವಿವರಗಳಲ್ಲಿ ಬದಲಾವಣೆಯಾಗಿದ್ದಲ್ಲಿ ಬ್ಯಾಂಕ್‌ನಲ್ಲಿ ಅದರ ಬಗ್ಗೆ ಕೂಡಲೇ ತಿಳಿಸಿ ಮತ್ತು ಎಚ್ಚರಿಕೆಗಳನ್ನು ಪಡೆಯಲು ಸಬ್‌ಸ್ಕ್ರೈಬ್ ಮಾಡಿ
- ನಿಮ್ಮ ಕಂಪ್ಯೂಟರ್/ಮೊಬೈಲ್‌ನಲ್ಲಿ ಅಸಲಿ ಆ್ಯಂಟಿ-ವೈರಸ್ ಮತ್ತು ಆ್ಯಂಟಿ-ಮ್ಯಾಲ್‌ವೇರ್ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಿ ಮತ್ತು ಅದನ್ನು ಅಪ್-ಟು-ಡೇಟ್ ಆಗಿ ಇರಿಸಿ
- ನಿಮ್ಮ ಪಾಸ್‌ವರ್ಡ್ ಅನ್ನು ಬಲಿಷ್ಠ ಮತ್ತು ವಿಶಿಷ್ಟವಾಗಿ ಇರಿಸಿ
- ನಿಮ್ಮ ಕಾರ್ಡ್ ಸಂಖ್ಯೆ, ಪಾಸ್‌ವರ್ಡ್‌ಗಳು ಅಥವಾ ಇತರ ಯಾವುದೇ ವೈಯಕ್ತಿಕ/ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಣೆ ಮಾಡುವುದನ್ನು ತಪ್ಪಿಸಲು ನಿಮ್ಮ ಬ್ರೌಸರ್‌ನ ಆಟೊಕಂಪ್ಲೀಟ್ ಸೆಟ್ಟಿಂಗ್‌ಗಳನ್ನು ಆಫ್ ಮಾಡಿ
- ಪ್ಲೇಸ್ಟೋರ್ ಅಥವಾ ಆ್ಯಪ್ ಸ್ಟೋರ್‌ನಿಂದ ಯಾವುದೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಮುನ್ನ ಜಾಗರೂಕರಾಗಿರಿ
- ವಹಿವಾಟು ನಡೆಸುವಾಗ ನಿಮ್ಮ ವೆಬ್ ಬ್ರೌಸರ್‌ನ ಸ್ಟೇಟಸ್ ಬಾರ್‌ನಲ್ಲಿ ಬೀಗದ ಚಿಹ್ನೆ ಅಥವಾ https ಇದೆಯೇ ಎಂದು ಗಮನಿಸಿ
- ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೋರುವ ಸಂದೇಶಗಳಲ್ಲಿ ಕಾಗುಣಿತ ದೋಷಗಳಿವೆಯೇ ಎಂದು ಯಾವಾಗಲೂ ಪರೀಕ್ಷಿಸಿ, ಇದರಿಂದ ನಕಲಿ ಸಂದೇಶ ಗುರುತಿಸಲು ಸಹಾಯವಾಗುತ್ತದೆ.
ಹೀಗೆ ಮಾಡಬೇಡಿ
- ಪಿನ್, ಪಾಸ್‌ವರ್ಡ್‌ಗಳು, ಒಟಿಪಿ ಅಥವಾ ಕಾರ್ಡ್ ವಿವರಗಳಂಥ ಸೂಕ್ಷ್ಮ ವಿವರಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ
- ನಿಮ್ಮ ಬ್ಯಾಂಕ್ ಖಾತೆ ಉಪಯೋಗಿಸುವಾಗ ಸಾರ್ವಜನಿಕ ವೈ-ಫೈ ಅಥವಾ ಉಚಿತ ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್)/ ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸಬೇಡಿ
- ಅಪರಿಚಿತ ಮೂಲಗಳು/ ಕಳುಹಿಸುವವರ ಐಡಿಗಳಿಂದ ಬಂದಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ
- 123456, ಹೆಸರುಗಳು, ಹುಟ್ಟಿದ ದಿನಾಂಕ ಮುಂತಾದ ಸಾಮಾನ್ಯವಾಗಿ ಬಳಸುವ ಪಾಸ್ವರ್ಡ್ಗಳಿಂದ ದೂರವಿರಿ.
- ನಿಮ್ಮ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ಎಲ್ಲಿಯೂ ಬರೆದಿಡಬೇಡಿ ಮತ್ತು ಅದನ್ನು ಬ್ರೌಸರ್‌ಗಳಲ್ಲಿ ಸೇವ್ ಮಾಡಬೇಡಿ
- ರಿಮೋಟ್ ಶೇರಿಂಗ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಉದಾಹರಣೆಗೆ ಎನಿಡೆಸ್ಕ್
- ಯುಪಿಐ ಮೂಲಕ ಹಣ ಸ್ವೀಕರಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಡಿ ಅಥವಾ ಪಿನ್ (ಪರ್ಸನಲ್ ಐಡೆಂಟಿಫಿಕೇಶನ್ ನಂಬರ್) ಅಥವಾ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ನಮೂದಿಸಬೇಡಿ
- ಎಟಿಎಂನಲ್ಲಿ ಅಪರಿಚಿತರಿಂದ ಸಹಾಯ ಪಡೆದುಕೊಳ್ಳಬೇಡಿ
ನೆನಪಿಡಿ:
ಕೊಟಕ್ ಮಹೀಂದ್ರ ಬ್ಯಾಂಕ್ ಅಥವಾ ಅದರ ಉದ್ಯೋಗಿಗಳು/ ಪ್ರತಿನಿಧಿಗಳು ನಿಮ್ಮ ವೈಯಕ್ತಿಕ ಖಾತೆಯ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ.
ಸುರಕ್ಷಿತವಾಗಿರಿ, ಜಾಗೃತರಾಗಿರಿ!